ಡೊಂಕು

ಕಥಾ ಸಂಗಾತಿ ಡೊಂಕು ವಿಜಯಾಮೋಹನ್ : ಅಕ್ಕಯ್ಯನೆದೆಯೊಳಗೆ ಬಗೆ ಬಗೆದು ಬಿತ್ತಿದ್ದ ಚಿಂತೆಗಳೆಂಬ ತರಾವರಿ ಬೀಜಗಳು, ಅವು ಒಂದಲ್ಲ ಎರಡಲ್ಲ, ಮೂರು ಸಂಗತಿಗಳು  ಮೊಳಕೆಯೊಡಕೊಂಡು.  ಪೈರುಗಳಾಗಿ ಬೆಳೆಯುವಾಗ, ಅವುಗಳನ್ನ ಬುಡ ಸಮೇತ ಕಿತ್ತೆಸೆಯಲಾಗದೆ, ಅವಳೊಳಗವಳು ಖಿನ್ನಳಾಗುತ್ತ ಕುಂತು, ಇಂಗೆ ಗರ ಬಡದೋನಂಗೆ ಕುಂತಿರುವ ಮಗನನ್ನು ನೋಡುತ್ತಿದ್ದರೆ. ಬೆಳಗಾ ಸಂಜೇಲಿ ಆ ಚಿಂತೆಯ ಪೈರುಗಳಿಗೆ ನೋವೆಂಬ ನೀರು ಜಿನುಗುತ್ತಿತ್ತು.       ಅವಳ ಮನೇಲಿ ಅವಳಿಗಿದ್ದದ್ದು ಒಂದೇ ಒಂದು ಗಂಡುಡಗ. ನೆಲಕ್ಕೆ ಬಿಟ್ಟರೆ ಎಲ್ಲಿ ಮಣ್ಣಾಗ್‌ತ್ತಾನೊ? ಅನ್ನುವಂತ ನಯಾ-ನಾಜೋಕಿನೊಳಗೆ ಸಾಕಿದ್ದಳು. … Continue reading ಡೊಂಕು